ಅಭಿಪ್ರಾಯ / ಸಲಹೆಗಳು

ಆಡಳಿತ ಮತ್ತು ನಿರ್ದೇಶನಗಳು​

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಯೋಜನೆಗಳನ್ನು ರೂಪಿಸುವ ಮೂಲಕ ಆರೋಗ್ಯ ನೀತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಸಚಿವರು ಜನಸಮುದಾಯಕ್ಕೆ, ವಿಶೇಷವಾಗಿ ಬಡ, ದುರ್ಬಲವರ್ಗದ, ಮಹಿಳೆ ಮತ್ತು ಮಕ್ಕಳಿಗೆ ಪ್ರಯೋಜನವಾಗುವ ಉದ್ದೇಶದಿಂದ ಇಲಾಖೆಗೆ ಯೋಜನೆಗಳ ಬಗ್ಗೆ ಕ್ರಮವಹಿಸಲು ನಿರ್ದೇಶನ ನೀಡುತ್ತಾರೆ. ಪ್ರಧಾನ ಕಾರ್ಯದರ್ಶಿಗಳು- ಆರೋಗ್ಯ, ಇವರು ಅವಶ್ಯಕ ಆಡಳಿತ ಬೆಂಬಲ ಕಲ್ಪಿಸಿ ಯೋಜನೆಗಳನ್ನು ರೂಪಿಸಿ, ಉಸ್ತುವಾರಿ ಮಾಡಿ ಜಾರಿಗೊಳಿಸಲು, ಅವಶ್ಯಕ ನಿರ್ದೇಶನ ನೀಡಲು, ಬೆಂಬಲಿಸಲು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಲಾಖೆಗೆ ಮಾರ್ಗದರ್ಶನ ನೀಡುತ್ತಾರೆ. ಆಯುಕ್ತರು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಇವರು ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು  ಯೋಜನಾ ವಿಭಾಗಗಳ ಕಾರ್ಯವನ್ನು ಸಂಯೋಜಿಸಿ ಉಸ್ತುವಾರಿ ಮಾಡುತ್ತಾರೆ. ರಾಜ್ಯದಲ್ಲಿ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಇಲಾಖೆಯು ಜನತೆಗೆ ಸೇವೆಗಳನ್ನು ಒದಗಿಸುತ್ತದೆ. ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ಯೋಜನಾ ನಿರ್ವಾಹಕರು ನೋಡಿಕೊಳ್ಳುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಿಗೆ ಅಪರ ನಿರ್ದೇಶಕರುಗಳು ಸಹಾಯಕರಾಗಿರುತ್ತಾರೆ. ಜಂಟಿ ನಿರ್ದೇಶಕರಿಗೆ ಸಹಾಯಕವಾಗಲು ಉಪನಿರ್ದೇಶಕರುಗಳಿರುತ್ತಾರೆ. ಮುಖ್ಯ ಲೆಕ್ಕಪತ್ರ ಅಧಿಕಾರಿ ಹಾಗೂ ಆರ್ಥಿಕ ಸಲಹೆಗಾರರೂ, ಮತ್ತು ಮುಖ್ಯ ಲೆಕ್ಕಪತ್ರಾಧಿಕಾರಿ(ಕು.ಕ) ಇವರುಗಳು ಹಣಕಾಸು ಮತ್ತು ಲೆಕ್ಕಪತ್ರಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಸಹಾಯಕರಾಗಿರುತ್ತಾರೆ. ಮುಖ್ಯ ಆಡಳಿತ ಅಧಿಕಾರಿ ಮತ್ತು ಮುಖ್ಯ ಸಚೇತಕ ಅಧಿಕಾರಿಗಳು ಆಡಳಿತ ಕುರಿತ ವಿಚಾರಗಳ ಮೇಲೆ ಸಹಾಯ ಮಾಡುತ್ತಾರೆ. ಸಿಸ್ಟಂ ಅನಾಲಿಸ್ಟ್ ಮತ್ತು ಸೀನಿಯರ್ ಪ್ರೋಗ್ರಾಮರ್ ಗಳು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳಿಗೆ ಸಹಾಯಕರಾಗಿರುತ್ತಾರೆ. ​

ಇತ್ತೀಚಿನ ನವೀಕರಣ​ : 29-04-2021 01:01 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080